Sri Kamadhenu Gosamrakshana Trust, Hoovinakere


Godhana

ಗೋ ಸೇವೆಯ ಮೂಲಕ ಶ್ರೀಗೋಪಾಲಕೃಷ್ಣನ ಅನುಗ್ರಹಕ್ಕೆ ಇದೊಂದು ಸುವರ್ಣಾವಕಾಶ.

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. "ಕಪಿಲಾಂ ದರ್ಪಣಂ ಭಾನುಮ್.... " ಎಂದು ಪ್ರತಿದಿನ ಪ್ರಾತಃ ಕಾಲ ನೋಡಬೇಕಾದ ಮಂಗಲ ದ್ರವ್ಯಗಳಲ್ಲಿ ಗೋವಿಗೇ ಮೊದಲ ಸ್ಥಾನ. ಹಿಂದೂ ಧಾರ್ಮಿಕ ಭಾವನೆಯಲ್ಲಿ ಗೋವಿಗೆ ಬಹಳಷ್ಟು ಪೂಜ್ಯ ಸ್ಥಾನ ಇದೆ. ಪ್ರತಿನಿತ್ಯ ಮನೆಯಲ್ಲಿ ಆಹಾರ ಸ್ವೀಕರಿಸುವ ಮೊದಲು ಗೋಗ್ರಾಸ ಸಮರ್ಪಣೆ ಪ್ರಾಚೀನರ ನಿತ್ಯವಿಧಿಯೇ ಆಗಿತ್ತು. ಇದಕ್ಕೆಲ್ಲಾ ಮುಕುಟವಿಟ್ಟಂತೆ ನಮ್ಮ ದೇವರಾದ ಕೃಷ್ಣನು ಗೋಪಾಲಕನಾಗಿ ಗೋಸೇವೆಯನ್ನು ಮಾಡಿ ಲೋಕಶಿಕ್ಷಣವನ್ನು ಕೊಟ್ಟಿದ್ದ. ಕಳೆದ ಒಂದೆರಡು ಶತಮಾನಗಳವರೆಗೆ ಜನರ ಶ್ರೀಮಂತಿಕೆಯನ್ನು ಅಳೆಯಲು ಅವನಲ್ಲಿರುವ ಗೋಸಂಪತ್ತು ಕೂಡಾ ಪ್ರಮುಖ ಮಾಪಕವೇ ಆಗಿತ್ತು. ಪ್ರತಿ ಮನೆಯಲ್ಲಿಯೂ ಗೋಶಾಲೆ, ಊರಿಗೊಂದು ಗೋಶಾಲೆ ಆ ಕಾಲಕ್ಕೆ ಸಾಮಾನ್ಯವಾಗಿತ್ತು.

Godhana

ಕೇವಲ ಧಾರ್ಮಿಕವಾಗಿ ಮಾತ್ರವಲ್ಲದೆ ಗೋವಿನಿಂದ ವ್ಯಾವಹಾರಿಕವಾಗಿಯೂ ಹಲವಾರು ಅನುಕೂಲಗಳು ಇರುವುದು ಇಂದಿಗೂ ನಿತ್ಯ ಸತ್ಯವೇ ಆಗಿದೆ. ಹೆತ್ತ ತಾಯಿಯಾದರೂ ಒಂದೆರಡು ವರ್ಷ ತನ್ನ ಮಗುವಿಗೆ ಹಾಲು ಕೊಟ್ಟಾಳು. ಆದರೆ ಗೋಮಾತೆಯ ಹಾಲು ನಮ್ಮ ಜೀವನ ಪರ್ಯಂತ ಅಗತ್ಯ ಹಾಗೂ ಅನಿವಾರ್ಯ. ಮನೆ ಮನೆಯಲ್ಲೂ ಆಗುತ್ತಿದ್ದ ಗೋವಿನ ಸಾಕಣೆ ಕಾಲದ ಹೊಡೆತಕ್ಕೆ ಸಿಲುಕಿ ಇಂದು ನಶಿಸಿ ಹೋಗುತ್ತಿದೆ. ಹಳೆಯ ಮನೆಯ ಗೋಶಾಲೆಗಳು ಗೋಡೌನ್ ಆಗಿ ಪರಿವರ್ತನೆ ಆದರೆ ಹೊಸಮನೆಗಳಲ್ಲಿ ಗೋಶಾಲೆಯನ್ನು ಕಲ್ಪಿಸಿಕೊಳ್ಳಲೂ ಅಸಾಧ್ಯ. ಇದಕ್ಕೆ ಬೆರಳೆಣಿಕೆಯಷ್ಟು ಅಪವಾದಗಳು ಇರಬಹುದು. ಆದರೂ ಇಂದು ಎಲ್ಲರಿಗೂ ಗೋವಿನ ಹಾಲು ಹಾಗೂ ಇತರ ಗೋಜನ್ಯ ಉತ್ಪನ್ನಗಳು ಬೇಕು ಆದರೆ ಗೋವಿನ ಸಾಕಾಣಿಕೆ ಅದರ ಆರೈಕೆ ಯಾರಿಗೂ ಬೇಡವಾಗಿದೆ.

ಇಂತಹ ಸಂದಿಗ್ಧ ಕಾಲಘಟ್ಟದಲ್ಲಿ ಶ್ರೀಮಧ್ವಾಚಾರ್ಯರಿಂದ ಸ್ಥಾಪಿತವಾದ ಗೋಪಾಲಕೃಷ್ಣನ ಪೂಜೆಯ ಅಷ್ಟಮಠದ ಯತಿಗಳು ಗೋಪಾಲಕೃಷ್ಣನ ಪೂಜೆಯಷ್ಟೇ ಪ್ರೀತಿಯಿಂದ ಗೋಸೇವೆಯನ್ನೂ ಮಾಡುತ್ತಿದ್ದಾರೆ.

ಗೋಶಾಲೆ, ಗೋಸಾಕಣೆ ಮುಂತಾದ ಗೃಹಸ್ಥರ ಕರ್ತವ್ಯವನ್ನು ಯತಿಗಳು ಮಾಡುತ್ತಿರುವುದು ನಿಜಕ್ಕೂ ಅಭಿವಂದನೀಯ. ಈ ನಿಟ್ಟಿನಲ್ಲಿ ಉಡುಪಿಯ ಸೋದೆ ಶ್ರೀ ವಾದಿರಾಜ ಮಠದ ಪರಮಪೂಜ್ಯ ಶ್ರೀ ಶ್ರೀ ವಿಶ್ವೋತ್ತಮ ತೀರ್ಥ ಶ್ರೀಪಾದರು, ವಾದಿರಾಜ ಗುರುಸಾರ್ವಭೌಮರ ಅವತಾರಕ್ಷೇತ್ರವಾದ ಹೂವಿನಕೆರೆಯಲ್ಲಿ ಒಂದು ಗೋಶಾಲೆಯನ್ನು ಸ್ಥಾಪಿಸಿ ಗೋವುಗಳ ಸಂರಕ್ಷಣೆಯನ್ನು ಮಾಡುವ ಕಾರ್ಯಕ್ಕೆ ಮುನ್ನುಡಿ ಬರೆದಿದ್ದರು. ಅವರ ಕರಕಮಲ ಸಂಜಾತರಾದ ಪ್ರಸ್ತುತ ಪೀಠಾಧಿಪತಿಗಳಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ತಮ್ಮ ವಿಶೇಷ ಆಸ್ಥೆಯಿಂದ ಗುರುಗಳು ಸ್ಥಾಪಿಸಿದ ಗೋಶಾಲೆಯನ್ನು ಇನ್ನಷ್ಟು ಸುಸಜ್ಜಿತವಾಗಿ ನಿರ್ಮಿಸಿ ಸುಮಾರು 450 ಕ್ಕೂ ಅಧಿಕ ಗೋವುಗಳಿಗೆ ಆಶ್ರಯ ಒದಗಿಸಿದ್ದಾರೆ.

ಸಾಮಾನ್ಯ ದಿನಗಳಲ್ಲೇ ಇಷ್ಟೊಂದು ಗೋವುಗಳ ಪಾಲನೆ ಪೋಷಣೆ ಆರ್ಥಿಕವಾಗಿ ದುಸ್ತರವಾದುದು. ಈಗ ಬಂದಿರುವ ಕೊರೋನಾದ ಪ್ರಭಾವದಿಂದ ಗೋಶಾಲೆಯ ನಿರ್ವಹಣೆ ಇನ್ನಷ್ಟು ಕಷ್ಟದಾಯಕವಾಗಿದೆ. ಇಲ್ಲಿನ ದನಗಳು ಯಾವುದೇ ರೀತಿಯಿಂದ ಲಾಭದಾಯಕವಲ್ಲದಿದ್ದರೂ ಗುರುಗಳ ಇಚ್ಛಾ ಶಕ್ತಿಯಿಂದ ಸಾಗುತಲಿದೆ. ನಾವೆಲ್ಲಾ ಮಾಡಬೇಕಾಗಿದ್ದ ಗೋವಿನ ನಿರ್ವಹಣೆಯನ್ನು ಗುರುಗಳು ಮಾಡುತ್ತಾರಲ್ಲಾ ಎಂದು ನಾವೆಲ್ಲಾ ಸುಮ್ಮನಿರುವುದು ತರವಲ್ಲ. ಗುರುಗಳ ಮೂಲಕ ನಡೆಸಲ್ಪಡುವ ಗೋಶಾಲೆಗೆ ಕಿಂಚಿತ್ ಸೇವೆಯನ್ನು ಮಾಡಿ ನಾವೂ ಕೂಡಾ ಪುಣ್ಯಭಾಜನರಾಗಬಹುದು.

ಪ್ರತ್ಯಕ್ಷವಾಗಿ ಬಂದು ಸೇವೆ ಸಲ್ಲಿಸಲು ಇದು ಸಕಾಲವಲ್ಲದ ಕಾರಣ ಗೋಸೇವೆಗೆ ಇಚ್ಚಿಸುವ ದಾನಿಗಳು ಈ ಕೆಳಕಂಡ ಮಾಧ್ಯಮದ ಮೂಲಕ ತಮ್ಮ ಯಥಾ ಶಕ್ತಿ ಯಥಾ ಮತಿ ದೇಣಿಗೆಯನ್ನು ಸಲ್ಲಿಸುವ ಮೂಲಕ ಗೋಸೇವೆಯಲ್ಲಿ ಭಾಗವಹಿಸಬಹುದು. ಇನ್ನು ಎಷ್ಟು ದಿನಗಳ ಕಾಲ ಕೊರೋನಾ ಬಾಧೆ ನಮ್ಮೆಲ್ಲರ ಮೇಲೆ ಆಗಲಿದೆ ಎನ್ನುವುದು ಯಾರಿಗೂ ತಿಳಿದಿಲ್ಲ. ಜನ ಜೀವನ ಸಹಜ ಸ್ಥಿತಿಗೆ ಬರುವವರೆಗೆ ಸಹೃದಯೀ ದಾನಿಗಳು ತಮ್ಮ ಕಿಂಚಿತ್ ಕಾಣಿಕೆಯನ್ನು ಗುರುಗಳ ಮೂಲಕ ಗೋಪಾಲಕೃಷ್ಣ ದೇವರಿಗೆ ಸಮರ್ಪಿಸಿ, ಶ್ರೀ ದೇವರ, ವಾದಿರಾಜರ ಅನುಗ್ರಹಕ್ಕೆ ಭಾಜನರಾಗಲು ಅವಕಾಶ ಇದೆ.

Godhana
Sodematha

Mode of Remittances

ಕಾಮಧೇನು ಗೋಸಂರಕ್ಷಣಾ ಕೇಂದ್ರ, ಹೂವಿನಕೆರೆ.

ಗೋಶಾಲೆ

ಗಾವೋ ಮೇ ಮಾತರಃ ಸರ್ವಾ: ಪಿತರಾಚೈವ ಗೋವೃಷಾ: | ಗ್ರಾಸಮುಷ್ಟಿಪ್ರಧಾನೇನ ಸ ಮೇ ವಿಷ್ಣು: ಪ್ರಸೀದತು ||

ನಮ್ಮ ಹಿಂದೂ ಸಂಸ್ಕೃತಿಯಲ್ಲಿ ಗೋವಿಗೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಗೋವುಗಳು ನಮಗೆ ತಾಯಂದಿರು. ಎತ್ತುಗಳು ನಮಗೆ ತಂದೆ. ವೃದ್ಧರಾದ ತಾಯಿತಂದೆಯರನ್ನು ಪಾಲಿಸುವುದು ಮಕ್ಕಳ ಕರ್ತವ್ಯ. ಈ ನಿಟ್ಟಿನಲ್ಲಿ 450 ಕ್ಕೂ ಹೆಚ್ಚು ಬರಡು ಹಸುಗಳು ಹಾಗು ಎತ್ತುಗಳನ್ನು ರಾಜರ ಜನ್ಮಕ್ಷೇತ್ರವಾದ ಹೂವಿನಕೆರೆಯಲ್ಲಿ ಪೋಷಿಸಲಾಗುತ್ತಿದೆ. ಶ್ರೀಶ್ರೀವಿಶ್ವೋತ್ತಮ ತೀರ್ಥರಿಂದ ಆರಂಭಗೊಂಡ ಗೋಸಂರಕ್ಷಣಾ ಕೇಂದ್ರ ಈಗ ಶ್ರೀಶ್ರೀವಿಶ್ವವಲ್ಲಭತೀರ್ಥರಿಂದ ಅಭಿವೃದ್ಧಿಗೊಳ್ಳುತ್ತಿದೆ. ಈ ಮಹತ್ತಮ ಕಾರ್ಯದಲ್ಲಿ ಮುಕ್ತ ಮನಸ್ಸಿನಿಂದ ಕೈಜೋಡಿಸಿ ಮುಕ್ತಿಯ ಭಾಗ್ಯ ಪಡೆಯಿರಿ.

ಗೋ ಸೇವೆಯ ಮೂಲಕ ಶ್ರೀಗೋಪಾಲಕೃಷ್ಣನ ಅನುಗ್ರಹಕ್ಕೆ ಇದೊಂದು ಸುವರ್ಣಾವಕಾಶ.

ಒಂದು ಬಾರಿ ದಾನ / One time donation
  •   1 ತಿಂಗಳ ಗೋಶಾಲೆಯ ಸೇವೆ - 3,00,000/-
  •   1 ತಿಂಗಳ ಹಿಂಡಿಯ ಸೇವೆ - 1,00,000/-
  •   1 ತಿಂಗಳ ಹುಲ್ಲಿನ ಸೇವೆ - 50,000/-
  •   1 ದಿನದ ಗೋಶಾಲೆಯಾ ಸೇವೆ - 10,000/-
  •   1 ದಿನದ ಗೋಗ್ರಾಸ ಸೇವೆ - 5,000/-
ಮರುಕಳಿಸುವ ಪಾವತಿ/ Recurring donation: Setup auto payment

ಮರುಕಳಿಸುವ ಪಾವತಿಗಳನ್ನು ಸಕ್ರಿಯಗೊಳಿಸಲು ಭಕ್ತರು ಆಯ್ಕೆ ಮಾಡಬಹುದು. ನೀವು ಆಯ್ಕೆ ಮಾಡಿದ ಯೋಜನೆಯ ಪ್ರಕಾರ ಮೊತ್ತವು ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಡೆಬಿಟ್ ಆಗುತ್ತದೆ. ನೀವು ಅದನ್ನು ಯಾವಾಗ ಬೇಕಾದರೂ ನಿಲ್ಲಿಸಬಹುದು.

  •   ಸಾಪ್ತಾಹಿಕ (Rs. 3.5 per week)
  •   ಎರಡು ವಾರಕ್ಕೊಮ್ಮೆ (Rs. 7 Bi-weekly )
  •   ಮಾಸಿಕ (Rs. 14 per Month)
  •   ವಾರ್ಷಿಕ (Rs. 168 per year)

To receive prasadam towards your recent payment for gosevaa kindly fill below details

Devotee Details
Donation Details

   One time donation      Recurring donation